ದಿನವಿಡಿ ದೇಹವು ದಣಿದ ಬಳಿಕ ರಾತ್ರಿ ಒಳ್ಳೆಯ ಗುಣಮಟ್ಟದ ನಿದ್ರೆ ಸಿಕ್ಕಿದರೆ ಮಾತ್ರ ಮರುದಿನ ಮತ್ತೆ ದೇಹವು ಒಳ್ಳೆಯ ಶಕ್ತಿಯಿಂದ, ಚುರುಕಾಗಿ ಇರಲು ಸಾಧ್ಯ. ನಿದ್ರೆಯ ಗುಣಮಟ್ಟವನ್ನು ಉತ್ತಮಪಡಿಸಿಕೊಂಡರೆ ಆಗ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇರುವುದು. ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ವಿಧಾನಗಳು ಇವೆ. ಇದರಲ್ಲಿ ಮುಖ್ಯವಾಗಿ ತಲೆದಿಂಬು ಇಲ್ಲದೆ ಮಲಗುವುದು, ನೆಲದ ಮೇಲೆ ಮಲಗುವುದು ಮತ್ತು ಒಳ ಉಡುಪು ಇಲ್ಲದೆ ಮಲಗುವುದು ಇತ್ಯಾದಿಗಳು. ಆದರೆ ಹೆಚ್ಚಿನವರಿಗೆ ಬಟ್ಟೆ ಇಲ್ಲದೆ ಮಲಗಲು ಅಷ್ಟು ಆರಾಮದಾಯಕವೆಂದು ಅನಿಸದು. ಕೆಲವರು ಮಾತ್ರ ಹೀಗೆ ಮಾಡಿ ಅದರ ಲಾಭ ಪಡೆದುಕೊಂಡಿದ್ದಾರೆ. ಒಳಉಡುಪು ಇಲ್ಲದೆ ರಾತ್ರಿ ನಿದ್ರಿಸುವುದರಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ಕೇಳಿದರೆ ಆಗ ಖಂಡಿತವಾಗಿಯೂ ನೀವು ಹಾಗೆ ಮಾಡುವಿರಿ. ಒಮ್ಮೆ ನೀವು ಹೀಗೆ ಮಲಗಿದರೆ ಮುಂದೆ ನಿಮಗೆ ಇದು ಅಭ್ಯಾಸವಾಗಿ, ಒಳ್ಳೆಯ ಭಾವನೆ ಮೂಡಿಸಬಹುದು.